مريم ابنت عمران عليها السلام موسوعة القرآن الكريم
Towards providing reliable exegeses and translations of the meanings of the Noble Qur'an in the world languagesDivorce [At-Talaq] - Kannada translation - Hamza Butur - Ayah 2
Surah Divorce [At-Talaq] Ayah 12 Location Madanah Number 65
فَإِذَا بَلَغۡنَ أَجَلَهُنَّ فَأَمۡسِكُوهُنَّ بِمَعۡرُوفٍ أَوۡ فَارِقُوهُنَّ بِمَعۡرُوفٖ وَأَشۡهِدُواْ ذَوَيۡ عَدۡلٖ مِّنكُمۡ وَأَقِيمُواْ ٱلشَّهَٰدَةَ لِلَّهِۚ ذَٰلِكُمۡ يُوعَظُ بِهِۦ مَن كَانَ يُؤۡمِنُ بِٱللَّهِ وَٱلۡيَوۡمِ ٱلۡأٓخِرِۚ وَمَن يَتَّقِ ٱللَّهَ يَجۡعَل لَّهُۥ مَخۡرَجٗا [٢]
ಅವರು (ವಿಚ್ಛೇದಿತೆಯರು) ತಮ್ಮ ಇದ್ದತ್‌ನ ಅವಧಿಯನ್ನು ಪೂರ್ತಿ ಮಾಡುವ ಹಂತಕ್ಕೆ ತಲುಪಿದರೆ ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ನಿಮ್ಮ ಬಳಿ (ಪತ್ನಿಯಾಗಿ) ಇರಿಸಿಕೊಳ್ಳಿರಿ ಅಥವಾ ಸ್ವೀಕಾರಾರ್ಹ ರೀತಿಯಲ್ಲಿ ಬಿಡುಗಡೆ ಮಾಡಿರಿ. ನಿಮ್ಮಲ್ಲಿನ ಇಬ್ಬರು ನ್ಯಾಯವಂತರನ್ನು ಸಾಕ್ಷಿ ನಿಲ್ಲಿಸಿರಿ. ಅಲ್ಲಾಹನ ಸಂಪ್ರೀತಿಗಾಗಿ ಸರಿಯಾದ ರೀತಿಯಲ್ಲಿ ಸಾಕ್ಷಿ ಹೇಳಿರಿ. ಇದು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ನೀಡಲಾಗುವ ಉಪದೇಶವಾಗಿದೆ. ಯಾರು ಅಲ್ಲಾಹನನ್ನು ಭಯಪಡುತ್ತಾನೋ ಅವನಿಗೆ ಅಲ್ಲಾಹು ನಿರ್ಗಮನ ದ್ವಾರವನ್ನು ಮಾಡಿಕೊಡುತ್ತಾನೆ.

